28 Jan 2013

ಸುಕ್ಣ್ಯಾಚಿ ವಾಟ್...


A recent poem that won me 2nd prize... in the Literary Competition...'Raknno weekly'...

ಸುಕ್ಣ್ಯಾಚಿ ವಾಟ್... ( A Bird's Path)
ಚಂದ್ರೆಮಾಚೆ ಪಾಕಾಟೆ ಫುಲ್ತಾನಾ
ಚಾಂದ್ನೆಂ ಭಾಯ್ರ್ ಸರ್‍ತಾ
ಸೊದ್ನಾಂ ತ್ಯಾ ಸುಕ್ಣ್ಯಾ-ವಾಟೆಚಿ...

ಸುಕ್ಣ್ಯಾಕ್ ಉಬ್‌ಲ್ಲಿಚ್ಚ್ ವಾಟ್ ತರ್
ಸುಕ್ಣ್ಯಾಂಚೊ ವಾಟೊಚ್ಚ್ ಚಂದ್ರೆಮಾಚಿ ವಾಟ್!!
ತರೀ ಸೊದ್ನಾಂ ತ್ಯಾ ಸುಕ್ಣ್ಯಾ-ವಾಟೆಚಿ...

ಆಪ್ಲೆಂ ಆಂಗ್ ಚೀರ್‍ನ್ ಉಬ್ಚ್ಯಾ ಸುಕ್ಣ್ಯಾಚಿ
ಲಾಗ್ಶಿಲ್ಲಿ ವಳಕ್ ವಾರ್‍ಯಾಕ್ ಆಸಾ
ತರೀ ವಾಟ್ ತಾಚಿ ಪಾರ್ಕುಂಚಿ ಕಶಿ
ಅಪುಣ್ಂಚ್ಚ್ ವಳೆಸ್!!!

ರೆಂವೆ ಕಣಾಂತ್ ರೆಂವ್ಟಾಚೊ ಘುಟ್ ಲಿಪ್‌ಲ್ಲೆ ಬರಿ
ಶೀತಳ್ ವಾರ್‍ಯಾಂತೀ ತ್ಯಾಚ್ಚ್ ಸುಕ್ಣ್ಯಾಚಿ ಮೂರ್!!

ನಿದ್‌ಲ್ಲ್ಯಾ ಸಂಸ್ರಾಚ್ಯಾ ಅತ್ಮ್ಯಾಚ್ಯಾ ಭಾಸೆಂತ್
ಮಿಸ್ಳಾಲ್ಲ್ಯಾ ತ್ಯಾ ಸುಕ್ಣ್ಯಾಚ್ಯಾ ಸೊಪ್ಣಾಂತೀ
ಚಾನ್ನ್ಯಾಚಿ ಆಶಾ ಆಸಾತ್?!
ತರೀ ಸೊಪ್ಣಾಂ ಜಾಗಂವ್ಕ್ ಸೊಡ್ಚೆ ನಾಂತ್
ರುಕಾಚೆ ಮೊಸ್ರಿ ಕೊಲೆ!!

ಮಾಸ್ಳೆಚ್ಯಾ ಮೆಟಾಂಕ್ ವಳ್ಕಾನಾತ್‌ಲ್ಲ್ಯಾ ದರ್‍ಯಾಂಬರಿ
ಮಾಡ್ತಿರ್ ಸೊಪ್ಣಾಂಚೊ ತತ್ಕಾಲಿನ್ ಸುಖ್!!

ಚಂದ್ರೆಮಾಚ್ಯಾ ಪಾವ್ಲಾಂಚ್ಯಾ ಸಾವ್ಳೆಂತ್‌ಚ್ಚ್ ಸುಕ್ಣೆಂ ನಿದ್ಲಾಂ ತರ್
ವಾಟೆರ್ ತಾಚ್ಯಾ ಚಾಂದ್ನೆಂ ಜಳ್ಲ್ಯಾರ್ ಕೆತೆಂ?
ರಾತ್ಚ್ಯಾ ಸುಕ್ಣ್ಯಾಚಿ ವಾಟ್ ರಿತಿಚ್ಚ್!!!

ಶೆಕಿಂ ವಾಟ್ ಚುಕ್‌ಲ್ಲ್ಯಾ ಸೊದ್ನಾಂಕ್ ಸೊಪ್ಣಾಂ ಭೆಟ್ಲ್ಯಾರೀ,
ವಾಟ್ ತಿ ಮೆಳ್ಚೆ ತಸಲಿ ನಂಯ್, ಭಿತರ್‌ಚ್ಚ್ ಆಸ್ಚಿ.
ಆಬ್ಳೆ ಎದೊಳ್ ತ್ಯಾ ಸುಕ್ಣ್ಯಾ-ವಾಟೆರ್‌ಚ್ಚ್ ಮೋಗ್ ಜಾಲಾ!!!

24 Mar 2012

ನಿನ್ನ ನೆನಪಾಗಿ...

ಒಂದು ದಿನ ನಿನ್ನ ನೆನಪಾಗಿ
ನೋಡಬೇಕೆನಿಸಿದಾಗ,
ನಾ ಹುಡುಕದ ಜಾಗವಿಲ್ಲ...
ಗೂಗಲ್ ಸರ್ಚ್‍,
ಫೇಸ್-ಬುಕ್,
ಟ್ವಿಟ್ಟರ್,
ಗೂಗಲ್ ಪ್ಲಸ್‍...
ಎಲ್ಲೂ ನಿನ್ನ ಸುಳಿವಿಲ್ಲದಾಗ
ನಾನೊಂದು ನಿರ್ಧಾರಕ್ಕೆ ಬಂದೆ
ನೀನಿನ್ನು ಬದುಕಿರಲು ಸಾಧ್ಯವಿಲ್ಲ!!!

In Your search


One day when i
Remembered u
There s no place where i dint search...
Google Search,
Facebook,
Twitter,
Google Plus,
Finally on not finding u anywhere
I came to a conclusion
There is no chance of u being alive!!!!

26 Dec 2011

ಒಮ್ಮೆಯಾದರೂ...



ಒಮ್ಮೆಯಾದರೂ ಬರಬಾರದೇ ಬಿರುಮಳೆಯಾಗಿ
ತೋಯಿಸೆ ನನ್ನ ಕನಸುಗಳ ಬಂಡಾಯದ ಕಾವ
ಕಾದ ನನ್ನೆದೆಯ ಹೊಲಕ್ಕೆ!!!

ಒಮ್ಮೆಯಾದರೂ ಅರಳಬಾರದೇ ನನ್ನಾಸೆಯ ಹೂವಾಗಿ

ಸಂಕುಚಿತ ಕಲ್ಪನೆಗಳ ಕಟ್ಟೆಯೊಡೆದು
ನನ್ನೊಲವಿನ ಹೂದೋಟದಲ್ಲಿ!!!

ಒಮ್ಮೆಯಾದರೂ ಮಿನುಗಬಾರದೇ -ತಾರೆಯಾಗಿ
ನಿರಾಶೆಯ ಮೋಡಗಳ ಮಧ್ಯದಿಂದ
ನನ್ನೆದೆಯ ಬಾಂದಳದಿ!!!

ಒಮ್ಮೆಯಾದರೂ ಇರಬಾರದೇ ನನ್ನ ಅತಿಥಿಯಾಗಿ

ನಿರೀಕ್ಷೆಗಳ ಹುಸಿಯಾಗಿಸದೇ
ನನ್ನಂತರಂಗದ ಮಹಲಿನೊಳು

ಒಮ್ಮೆಯಾದರೂ ಉಳಿಯಬಾರದೇ ನನ್ನ ನೆನಪಾಗಿ
ಮರೆವಿನ ಜೊಂಪಿನ ನಡುವಲ್ಲಿ
ನೋಡಲನುವಾಗುವಂತೆ
ಮತ್ತೆ ಮತ್ತೆ !!!

5 Dec 2011

ನೀನಾದರೂ......



ಬೀಳದೆ, ಒಡೆದ ಕನಸುಗಳಿಗೆ ತೇಪೆ ಹಾಕಿ,
ಮಾರಾ
ಕ್ಕಿಟ್ಟಿರುವೆ ಮನದ ಅಂಗಡಿಯಲಿ.
ಖರೀದಿಸುವವರಿಲ್ಲದೆ ಮುಗ್ಗುತಿವೆ,
ಕೊಳ್ಳಬಾರದೇ ನೀನಾದರೂ....

ಹೂಳದೇ ಹುಸಿಯಾಡುವ ಸಮಾಧಿಯ ಅಗೆದು,
ಸಾಯದ ಒಲವನು ತೆರೆದಿಟ್ಟಿರುವೆ
ನಂಬುತ್ತಿಲ್ಲ ಸತ್ಯವ ಯಾರೂ ಕೂಡಾ,
ನಂಬಬಾರದೇ ನೀನಾದರೂ ....

ಅವ್ಯಕ್ತ ಭಾವಗಳು ವ್ಯಕ್ತಪಡಿಸಲಾಗದೆ
ಹೃದಯ-ಸಾಗರದಾಳ ಸೇರಿವೆ.
ಈಜು ಬಾರದವರೇ ಇಲ್ಲಿ ಎಲ್ಲ,
ಭಾವೋತ್ಖನನಕ್ಕೆ ನೆರವಾಗಬಾರದೇ ನೀನಾದರೂ..

ಬರೆಯದ ಪುಸ್ತಕವನ್ನು ಎರವಲು ತಂದು ,
ಓದಲು ಕುಳಿತಿರುವೆ ತನ್ಮಯದಿ
ಓದಲಾಗುತ್ತಿಲ್ಲ ಒಲವ ಮಬ್ಬಿನಲಿ,
ಅಕ್ಷರವಾಗಬಾರದೇ ನೀನಾದರೂ .....

ಬೀಳದ ಜಡಿ ಮಳೆಗೆ ಮೈಯೊಡ್ಡಿ
ಕಾಣದ ಕಾಮನ ಬಿಲ್ಲನು ಹುಡುಕುತಿರುವೆ
ತೋರಿಸಲಾರದ ಕುರುಡರೇ ಎಲ್ಲ,
ತೋರಿಸಿಬಿಡಬಾರದೇ ನೀನಾದರೂ...

 
"ನನ್ನವಳನ್ನಾಗಿಸದ ನಿನ್ನ ಕಳೆದುಕೊಳ್ಳುವ ಭಯವಿಲ್ಲದಿದ್ದರೂ
ನನ್ನದೇ ಪ್ರಪಂಚದಲ್ಲಿ ನಾನು ಕಳೆದುಕೊಳ್ಳುವುದನ್ನು ತಪ್ಪಿಸಲು
ಬರಬಾರದೇ ಕೊನೆಯದಾಗಿ ನಿನಾದರೂ? "