ಒಮ್ಮೆಯಾದರೂ ಬರಬಾರದೇ ಬಿರುಮಳೆಯಾಗಿತೋಯಿಸೆ ನನ್ನ ಕನಸುಗಳ ಬಂಡಾಯದ ಕಾವ
ಕಾದ ನನ್ನೆದೆಯ ಹೊಲಕ್ಕೆ!!!
ಒಮ್ಮೆಯಾದರೂ ಅರಳಬಾರದೇ ನನ್ನಾಸೆಯ ಹೂವಾಗಿ
ಸಂಕುಚಿತ ಕಲ್ಪನೆಗಳ ಕಟ್ಟೆಯೊಡೆದು
ನನ್ನೊಲವಿನ ಹೂದೋಟದಲ್ಲಿ!!!
ಒಮ್ಮೆಯಾದರೂ ಮಿನುಗಬಾರದೇ -ತಾರೆಯಾಗಿ
ನಿರಾಶೆಯ ಮೋಡಗಳ ಮಧ್ಯದಿಂದ
ನನ್ನೆದೆಯ ಬಾಂದಳದಿ!!!
ಒಮ್ಮೆಯಾದರೂ ಇರಬಾರದೇ ನನ್ನ ಅತಿಥಿಯಾಗಿ
ನಿರೀಕ್ಷೆಗಳ ಹುಸಿಯಾಗಿಸದೇ
ನನ್ನಂತರಂಗದ ಮಹಲಿನೊಳು
ಒಮ್ಮೆಯಾದರೂ ಉಳಿಯಬಾರದೇ ನನ್ನ ನೆನಪಾಗಿ
ಮರೆವಿನ ಜೊಂಪಿನ ನಡುವಲ್ಲಿ
ನೋಡಲನುವಾಗುವಂತೆ






