26 Dec 2011

ಒಮ್ಮೆಯಾದರೂ...



ಒಮ್ಮೆಯಾದರೂ ಬರಬಾರದೇ ಬಿರುಮಳೆಯಾಗಿ
ತೋಯಿಸೆ ನನ್ನ ಕನಸುಗಳ ಬಂಡಾಯದ ಕಾವ
ಕಾದ ನನ್ನೆದೆಯ ಹೊಲಕ್ಕೆ!!!

ಒಮ್ಮೆಯಾದರೂ ಅರಳಬಾರದೇ ನನ್ನಾಸೆಯ ಹೂವಾಗಿ

ಸಂಕುಚಿತ ಕಲ್ಪನೆಗಳ ಕಟ್ಟೆಯೊಡೆದು
ನನ್ನೊಲವಿನ ಹೂದೋಟದಲ್ಲಿ!!!

ಒಮ್ಮೆಯಾದರೂ ಮಿನುಗಬಾರದೇ -ತಾರೆಯಾಗಿ
ನಿರಾಶೆಯ ಮೋಡಗಳ ಮಧ್ಯದಿಂದ
ನನ್ನೆದೆಯ ಬಾಂದಳದಿ!!!

ಒಮ್ಮೆಯಾದರೂ ಇರಬಾರದೇ ನನ್ನ ಅತಿಥಿಯಾಗಿ

ನಿರೀಕ್ಷೆಗಳ ಹುಸಿಯಾಗಿಸದೇ
ನನ್ನಂತರಂಗದ ಮಹಲಿನೊಳು

ಒಮ್ಮೆಯಾದರೂ ಉಳಿಯಬಾರದೇ ನನ್ನ ನೆನಪಾಗಿ
ಮರೆವಿನ ಜೊಂಪಿನ ನಡುವಲ್ಲಿ
ನೋಡಲನುವಾಗುವಂತೆ
ಮತ್ತೆ ಮತ್ತೆ !!!

No comments:

Post a Comment